BM ಗಿರಿರಾಜರ ಮೈತ್ರಿ ಕನ್ನಡ ಸಿನೆಮಾ ವಿಮರ್ಶೆ

This post is in Kannada language, a review of BM Giriraj directed successful Kannada movie, Maithri. Non Kannada readers may please check latest travel and auto posts.

ಮೈತ್ರಿ ಕನ್ನಡ ಸಿನೆಮಾ ಜಟ್ಟ ಖ್ಯಾತಿಯ ಗಿರಿರಾಜ ನಿರ್ದೇಶಿಸಿರುವ ಹೊಸ ಸಿನೆಮ. ಮೈತ್ರಿ ಸಿನೆಮಾ ಕರ್ನಾಟಕದಾದ್ಯ೦ತ ಯಶಸ್ವಿಯಾಗಿ ಓಡುತ್ತಿದೆ. ಇದರ ಬಗ್ಗೆ ಪ್ರತಿಯೊಬ್ಬರೂ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಾನು ಬಿಡುಗಡೆಯ ದಿನ  ಶುಕ್ರವಾರವೇ ಸಿನೆಮಾ ನೋಡಿದ್ದರೂ ವಿಮರ್ಶೆ ಬರೆಯುವುದು ನಿಧಾನವಾಯಿತು.

ಚಿತ್ರ ಬಿಡುಗಡೆಯ ಮೊದಲು ಚಿತ್ರದ ಬಗ್ಗೆ ಅಷ್ಟೇನೂ ಹೈಪ್ ಇರಲಿಲ್ಲ. ಆದರೆ ನಿರ್ದೇಶಕ ಗಿರಿರಾಜ ಇತರರ೦ತೆ ಮಾಮೂಲಿ ಮಸಾಲೆ ಚಿತ್ರ ಮಾಡುವವರಲ್ಲ ಅ೦ತ ಗೊತ್ತಿದ್ದುದರಿ೦ದ ಮೈತ್ರಿ ಹೇಗಿರಬಹುದು ಎ೦ಬ ಕುತೂಹಲ ಇತ್ತು. ನವಿಲಾದವರು, ಜಟ್ಟ ಸಿನೆಮಾಗಳು ದುಡ್ಡು ಮಾಡದಿದ್ದರೂ 'ಎಲ್ಲರಂತಲ್ಲ ನಮ್ಮ ಗಿರಿ' ಎಂಬ ಭರವಸೆ ಮೂಡಿಸುವಲ್ಲಿ ಯಶಸ್ವಿಯಾಗಿದ್ದವು ಹಾಗಾಗಿ ಆತನ ಮುಂದಿನ ಸಿನೆಮಾ ನೋಡಲು ಕಾಯುತ್ತಿದ್ದೆವು.

ಸಿನೆಮಾ ಚೆನ್ನೈನಲ್ಲಿ ಬಿಡುಗಡೆಯಾಗುವುದೋ ಇಲ್ಲವೋ ಎಂಬ ಖಚಿತ ಮಾಹಿತಿ ಇರಲಿಲ್ಲ. ಆದರೆ ಫೆಬ್ರವರಿ ಇಪ್ಪತ್ತನೇ ತಾರೀಕು ಅಂದರೆ ಮೈತ್ರಿ ಬಿಡುಗಡೆಯಾದ ದಿನ ಚೆನ್ನೈ ನ ಮಾಯಾಜಾಲ್ ನಲ್ಲಿ ಪ್ರದರ್ಶನಕ್ಕಿರುವುದು ತಿಳಿಯಿತು. ಬಿಡುವು ಮಾಡಿಕೊಂಡು ಸಂಜೆಯ ಪ್ರದರ್ಶನ ನೋಡಲು ಹೋದೆ. ಪ್ರದರ್ಶನಕ್ಕಿನ್ನು ಹತ್ತು ನಿಮಿಷವಿರುವಾಗಲೂ ಹೊರಗೆ ಯಾರೂ ಇರಲ್ಲಿಲ್ಲ. "ಕನಿಷ್ಟ ಹತ್ತು ಜನ ಇದ್ದರೆ ಮಾತ್ರ ಷೋ" ಎಂಬ ಅಣಿಮುತ್ತು ಗೇಟ್ ಕೀಪರ್ ನಿಂದ ಬಂತು. ಮೈತ್ರಿ ಇನ್ನೊಂದು ಜಟ್ಟ ಆಗುತ್ತದೇನೋ ಅನಿಸಿತು. ಆದರೆ ಕೊನೆಯ ಕ್ಷಣದಲ್ಲಿ ಇನ್ನೊಂದಿಷ್ಟು ಜನರ ಗುಂಪು ಬಂದಿತು, ಪ್ರದರ್ಶನ ಪ್ರಾರ೦ಭವಾಯಿತು.

ಮೊದಲ ಕ್ಷಣದಿಂದ ಕೊನೆಯ ವರೆಗೆ ಎಲ್ಲೂ ಬೋರ್ ಹೊಡೆಸದೆ ಕುತೂಹಲ ಕಾಯ್ದುಕೊಂಡು ನೋಡಿಸಿಕೊಂಡು ಹೋಯಿತು
ಚಿತ್ರದ ಪ್ರತಿ ವಿಭಾಗದಲ್ಲೂ ಜಟ್ಟ ಗೆ ಹೋಲಿಸಿದರೆ ಬಹಳ ಸುಧಾರಣೆಯಾಗಿದೆ. ಮೊದಲ ಹಾಡಿನ ಸಾಹಿತ್ಯ ಮನ ಮುಟ್ಟುತ್ತದೆ. "ದೊಡ್ಡವರಿಗೆ ಕುಂತರು ನಿಂತರು ಕಾಯ್ದೆ ಕಾನೂನು, ಮಕ್ಕಳಿಗೆ ಹಾಗೇನಿಲ್ಲ. ನಾವ್ಯಾಕೆ ತುಂಟತನ ಮಾಡಿಕೊಂಡು  ಮಕ್ಕಳಾಗೇ ಇರಬಾರದು " ಇದು ಆ ಹಾಡಿನ ತಾತ್ಪರ್ಯ. ಕತೆಯ ಬಗ್ಗೆ ನಿಮಲ್ಲಿ ಬಹುತೇಕರಿಗೆ ಈಗಾಗಲೇ ತಿಳಿದಿರುವುದರಿಂದ ಒಂದೆರಡು ವಾಕ್ಯಗಲ್ಲೇ ಮುಗಿಸುತ್ತೇನೆ. ಸಿದ್ದ ಎಂಬ ಬಡ ಹುಡುಗನ ಜೀವನದ ಸುತ್ತ ಸಾಗುವ ಕತೆ ಆತನ ಬುದ್ದಿವಂತಿಕೆ, ಬಡತನದಿಂದ ಅನುಭವಿಸಬೇಕಾದ ಅನಿವಾರ್ಯತೆಗಳು ಇವುಗಳ ಬಗ್ಗೆ ಕತೆ ಸಾಗುತ್ತದೆ. ಮಕ್ಕಳನ್ನು ದುರುಪಯೋಗ ಪಡಿಸಿಕೊಳ್ಳುವ ದಂಧೆಯನ್ನು ಪರಿಣಾಮಕಾರಿಯಾಗಿ ತೋರಿಸಲಾಗಿದೆ. ಉತ್ತಮ ಪ್ರಜೆಯಾಗಬಹುದಾಗಿದ್ದವರು ಅಪರಾಧಿಗಳಾಗಿ ರೂಪುಗೊಳ್ಳಲು ಏನೆಲ್ಲಾ ಕಾರಣಗಳಿರಬಹುದು ಎಂದು ತಿಳಿಯುತ್ತದೆ.  ಪುನಿತ್ ತಮ್ಮ ನಿಜ ಜೀವನದ ಕೆಲಸವನ್ನೇ ಚಿತ್ರದಲ್ಲೂ ಮಾಡುತ್ತಾರೆ. ಹಾಗಾಗಿ ಎಲ್ಲೂ ಅಸ್ವಾಭಾವಿಕತೆ, ಆಡಂಬರ, ಅನಗತ್ಯ ಹಾಡು/ಕುಣಿತ ಇತ್ಯಾದಿ ಇಲ್ಲ. ರಿಮಾಂಡ್ ಹೋಮ್ ದೃಶ್ಯಗಳು ನಾವು ಕಲಿತ ನವೋದಯ ಶಾಲೆಯನ್ನು ನೆನಪಿಸುತ್ತವೆ. ನನಗೆ ತಿಳಿದಂತೆ ಕೋಟ್ಯಾಧಿಪತಿ ಕಾರ್ಯಕ್ರಮ ನೇರಪ್ರಸಾರ ಇರುವುದಿಲ್ಲ. Fastest Finger First ನಲ್ಲಿ ಅನಿಯಮಿತ ಅವಕಾಶ ಕೂಡ ಇರುವುದಿಲ್ಲ. ಆದರೆ ಕತೆಗಾಗಿ ಹಾಗೆ ತೋರಿಸಲಾಗಿದೆ. ಕತೆಯನ್ನು ಕಟ್ಟಿಕೊಟ್ಟ ರೀತಿ, ಪಾತ್ರ ಪೋಷಣೆ, ಚಿತ್ರದ ಸಂದೇಶ ಇತ್ಯಾದಿಗಳಲ್ಲಿ ನಿರ್ದೇಶಕರ ಶ್ರಮ , ಕಾಳಜಿ ಮತ್ತು ಬುದ್ದಿವಂತಿಕೆ ಎದ್ದು ಕಾಣುತ್ತದೆ. ಪ್ರೇಕ್ಷಕರಿಗೆ ಬೇಕಾದ ಮಸಾಲೆ ಇಲ್ಲದೆ ಚಿತ್ರ ದುಡ್ಡು ಮಾಡದಿದ್ದರೂ ತೊಂದರೆಯಿಲ್ಲ, ಗುಣಮಟ್ಟದಲ್ಲಿ ರಾಜಿಯಾಗುವುದಿಲ್ಲ ಎಂಬ ನಿಲುವು ಪ್ರಶಂಸನೀಯ.

ಗಿರಿರಾಜನ ಭೂಮಿ ತಂಡದ ಅನೇಕ ಕಲಾವಿದರು ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಜಟ್ಟ ನಾಯಕಿ ಸುಕೃತಾ ರವಿ ಕಾಳೆ ಹೆಂಡತಿಯಾಗಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.  ಜಾನ್ಸನ್ ಪಾತ್ರ ಚೆನ್ನಾಗಿದೆ (೧೨ ವರ್ಷಗಳ ಹಿಂದೆ ಗಿರಿರಾಜನ ನಾಟಕವೊಂದರಲ್ಲಿ ನಾನೂ ಒಂದು ಸಣ್ಣ ಪಾತ್ರ ಮಾಡಿದ್ದೆ. ನಟನೆ ನನ್ನಿಂದ ಸಾಧ್ಯವಿಲ್ಲ ಎಂದು ಅರಿವಾಗಿ ಮುಂದೆ ಆ ಪ್ರಯತ್ನ ಮಾಡಲಿಲ್ಲ.  [ಕೆಲ ಚಿತ್ರಗಳು ಇಲ್ಲಿವೆ ] ಆದರೆ ಗಿರಿರಾಜನಿಗೆ ಅವನ ಜೀವನದ ಗುರಿ, ಆಸಕ್ತಿ ಸ್ಪಷ್ಟವಿತ್ತು. ಮನೆಯವರ ವಿರೋಧವಿದ್ದರೂ, ಆರ್ಥಿಕ ಯಶಸ್ಸು ಸಿಗದಿದ್ದರೂ ಆತ ತನಗನಿಸಿದ ಮಾರ್ಗದಲ್ಲಿ ಮುನ್ನೆಡೆದು ಇಂದು ನಿರೀಕ್ಷಿಸಿದ ಗುರಿ ತಲುಪಿದ್ದಾನೆ, ಯಶಸ್ಸು ಕಂಡಿದ್ದಾನೆ. ಅವನ ಸಹಪಾಠಿಗಳಾದ ನಮ್ಮಲ್ಲಿ ಹಲವರು IAS, IPS ಇತ್ಯಾದಿ ಹತ್ತು ಹಲವು ಜೀವನೋದ್ದೇಶದ ಬಗ್ಗೆ ಮಾತನಾಡುತ್ತಿದ್ದರು ಇಂದು ಒಂದಿಲ್ಲೊಂದು IT ಕಂಪೆನಿಗಳಿಗೆ ಮಣ್ಣು ಹೊರುತ್ತಿದ್ದೇವೆ. ಮೈತ್ರಿಯ ಯಶಸ್ಸಿನಿಂದಾಗಿ ಗಿರಿರಾಜನಿಗೆ ಮುಂದೆ ಇನ್ನೂ  ಉತ್ತಮ ಪ್ರಾಜೆಕ್ಟ್ಗಗಳು ಸಿಗಲಿ, ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ.

ಪುರುಸೊತ್ತಿದ್ದರೆ ಮೈತ್ರಿ ತಂಡದೊಡಗಿನ TV9 ಚರ್ಚೆ ಇಲ್ಲಿ ನೋಡಿ.


ಎರಡು ದಿನ ಬಿಟ್ಟು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಗೋಪಾಲನ್ ಮಾಲ್ ಗೆ ಇನ್ನೊಮ್ಮೆ ನೋಡೋಣ ಎಂದು ಹೋದರೆ ಚಿತ್ರ ಮಂದಿರ ತುಂಬಿತ್ತು . ಗಿರಿರಾಜನ ಪ್ರಕಾರ ನಾಡಿನ ಬಹುತೇಕ ಮಲ್ಟಿಪ್ಲೆಕ್ಷ್ ಗಳಲ್ಲಿ ಮೈತ್ರಿ ಚೆನ್ನಾಗಿ ಓಡುತ್ತಿದೆ. ಸಿಂಗಲ್ ಸ್ಕ್ರೀನ್ ಗಳಲ್ಲಿ ಕುಂಟುತ್ತಿದೆ. ಆದರೆ ಚೆನ್ನೈ ನಲ್ಲಿ ಎರಡನೇ ವಾರ ಮೈತ್ರಿ ಪ್ರದರ್ಶನ ಸ್ಥಗಿತಗೊಂಡಿದೆ.  ಇವತ್ತಿನ ಕನ್ನಡ ಪ್ರಭ ದಲ್ಲಿ ಮೈತ್ರಿ ಬಗ್ಗೆ ಒಂದು ಉತ್ತಮ ಬರಹವಿದೆ. ಚಿತ್ರ ಚೆನ್ನಾಗಿದೆ ಎಂದು ನೋಡಿದವರೆಲ್ಲ ಹೇಳುತ್ತಿದ್ದರೂ ಹೆಚ್ಚು ಹೆಚ್ಚು ಜನ ಚಿತ್ರ ಮಂದಿರಕ್ಕೆ ಹೋಗಿ ನೋಡದಿರುವುದು ನಮ್ಮ ವೈಚಾರಿಕ ದುರಂತ ಎಂದು ಸರಿಯಾಗಿ ವಿವರಿಸಲಾಗಿದೆ.
Best wishes Giri

4 comments:

 1. Hi Nidhi,
  Mythri is running for 2nd Week in many Bangalore theatres. Read my take on Mythri here - Mythri Review

  ReplyDelete
 2. Have heard many good things about the movie. But the storyline sounded a lot like Slumdog Millionaire. Is that the case?

  ReplyDelete
 3. Thanks Raveesh

  @Arun: True, there are similarities

  ReplyDelete
 4. Thanks Raveesh

  @Arun: True, there are similarities

  ReplyDelete

Appreciate your efforts and interests to comment. Comments may be moderated due to increased spam. Will ideally respond to comments within few days.Use Anonymous option if you don't wish to leave your name/ID behind- Shrinidhi

Powered by Blogger.