ಟೆಕ್ ಬುಕ್ - ಟಿ ಜಿ ಶ್ರೀನಿಧಿ (Techbook by Srinidhi TG) - eNidhi India Travel Blog

ಟೆಕ್ ಬುಕ್ - ಟಿ ಜಿ ಶ್ರೀನಿಧಿ (Techbook by Srinidhi TG)

This post is a quick review of a Kannada book named TechBook by Srinidhi TG (Not me, another very popular Srinidhi based in BLR) and his decade old tech website, ejnana.com. Non Kannada readers may check out other book reviews here or Srilanka or Australia posts here. - Shrinidhi Hande

ಇದು ಟೆಕ್ಸ್ಟ್ ಬುಕ್ ಅಲ್ಲ, ಟೆಕ್ ಬುಕ್ - ಟಿ  ಜಿ ಶ್ರೀನಿಧಿ 

ಟೆಕ್ ಬುಕ್ ಟಿ ಜಿ ಶ್ರೀನಿಧಿಯವರ ಹೊಸ ಪುಸ್ತಕ. ಇತ್ತೀಚಿಗೆ ಪ್ರಚಾರಕ್ಕೆ ಬಂದಿರುವ ವಿವಿಧ ತಂತ್ರಜ್ಞಾನ ಸಂಬಂಧಿ ವಿಷಯಗಳನ್ನು ಇದರಲ್ಲಿ ಸುಲಭವಾಗಿ ವಿವರಿಸಲಾಗಿದೆ . 3D ಪ್ರಿಂಟಿಗ್ , ಬಿಗ್ ಡಾಟಾ, ಮಿಥ್ಯಾ ವಾಸ್ತವ, ಇ-ಕಸ, ಕ್ರಿಕೆಟ್ ನಲ್ಲಿ ತಂತ್ರಜ್ಞಾನ, ಮಾನವಯಂತ್ರಗಳು, ಡ್ರೋನ್  ಹೀಗೆ ಹಲವು ವಿಷಯಗಳನ್ನು ಸರಳವಾಗಿ, ಸುಂದರವಾಗಿ ವಿವರಿಸಿ ಕೊಡಲಾಗಿದೆ. ಚಿಕ್ಕ ಮಕ್ಕಳಿಗೆ, ಮನೆಯ ಹಿರಿಯರಿಗೆ ತಾಂತ್ರಿಕ ವಿಷಯಗಳನ್ನು ಸುಲಲಿತವಾಗಿ ಅರ್ಥೈಸಲು ಈ ಪುಸ್ತಕ ಸಹಕಾರಿ.

ಮೊಬೈಲುಗಳಲ್ಲಿ ಚಿನ್ನ ಬಳಸಿರುವುದು ಗೊತ್ತಿತ್ತು, ಆದರೆ ಎಷ್ಟು ಇರತ್ತೆ ಅಂತ ಗೊತ್ತಿರಲಿಲ್ಲ. ಒಂದೆರಡು ಗ್ರಾಂ ಸಿಕ್ಕರೂ ಸಾವಿರಾರು ರು ಆಗುತ್ತೆ ಅಂದುಕೊಂಡು ಒಂದೆರಡು ಹಳೆಯ ಮೊಬೈಲುಗಳನ್ನು ತೆಗೆದಿಟ್ಟಿದ್ದೆ. ಟೆಕ್ ಬುಕ್ ಓದಿದ ಮೇಲೆ ಅವನ್ನು ಇಟ್ಟುಕೊಳ್ಳಲೂ ಆಗದೆ (ಒಂದೆರಡು ಹಳೆ ಮೊಬೈಲಿಂದ ಚಿನ್ನ ತೆಗೆಯುವುದು ಆಗುವ ಹೋಗುವ ಕೆಲಸವಲ್ಲವಂತೆ ) ಎಸೆಯಲೂ ಆಗದೇ (ಇ-ಕಸ) ಕುಳಿತಿದ್ದೇನೆ. :(

ಶಿವಮೊಗ್ಗದಲ್ಲಿ ಯಾರೋ ಒಬ್ಬರು ಕೆಟ್ಟು ಹೋದ LED ದೀಪಗಳನ್ನು ಸರಿಪಡಿಸುತ್ತರ೦ತೆ. ಇ-ಕಸವನ್ನು ದುಡ್ಡುಕೊಟ್ಟು ಸಂಗ್ರಹಿಸುವ ಕೆಲವು ಸ್ಟಾರ್ಟ್-ಅಪ್ ಗಳು ಪ್ರಾರಂಭವಾಗಿದೆ [link]

ಗೋ ಪ್ರೋ ಇತ್ಯಾದಿ ಕ್ಯಾಮೆರ ಹಾಗು ನಿಸ್ತಂತು ಚಾರ್ಜಿಂಗ್ ಕುರಿತಂತೆ ಸ್ವಲ್ಪ ಬರೆಯಬಹುದಿತ್ತೆಂದು ನನ್ನ ಅನಿಸಿಕೆ. ಗೊಗಲ್ ಕ್ರೋಮ್ ಕಾಸ್ಟ್ ಬಗ್ಗೆಯೂ ಸ್ವಲ್ಪ ಹೆಚ್ಚು ಬರೆಯಬಹುದಿತ್ತೇನೊ. ಬಳಸಿದ ಚಿತ್ರಗಳ ಮೂಲ ಫೋಟೋಗ್ರಾಫರ್ ಅಥವಾ ವೆಬ್ ಸೈಟ್ ಹೆಸರು ನಮೂದಿಸಬೇಕಿತ್ತು.

Key Summary
  • Title: Tech Book
  • Author: Srinidhi TG
  • Publishers: Bharathi Prakashana, Mysore
  • Genre: Technology/Kannada
  • ISBN 13: NA
  • Pages 132
  • MRP:  Rs ೧೦೦

ಬೆಲೆ ಕೇವಲ ೧೦೦ ರೂ ಟೆಕ್ ಬುಕ್ ಖರೀದಿಸಲು ಇಲ್ಲಿ ಕ್ಲಿಕ್ಕಿಸಿ 

ಇ ಜ್ಞಾನ .com  ಕುರಿತಂತೆ :  ಏಪ್ರಿಲ್ ೨೦೦೭ರಲ್ಲಿ ಪ್ರಾರಂಭವಾದ ಇ ಜ್ಞಾನ .com ಟಿ ಜಿ ಶ್ರೀನಿಧಿ ಯವರ ತಾಣ  ತಂತ್ರಜ್ಞಾನ ಕುರಿತಾದ ಬರಹಗಳಿಂದ ಸಾಕಷ್ಟು ಜನಪ್ರಿಯವಾಗಿದೆ. ಮಾರುಕಟ್ಟೆಗೆ ಬರುವ ಹೊಸ ಹೊಸ ಮೊಬೈಲುಗಳು, ಆಪ್, ಇತರ ಉಪಕರಣಗಳ ಬಗ್ಗೆ ತಿಳಿದುಕೊಳ್ಳಲು ಯಾವುದೇ ಆಂಗ್ಲ ಭಾಷಾ ಬ್ಲಾಗುಗಳನ್ನು ಅವಲಂಬಿಸದೆ ಕನ್ನಡದಲ್ಲೇ ತಿಳಿದುಕೊಳ್ಳಲು ಇ ಜ್ಞಾನ .com ಬಹಳ ಉಪಯೋಗಿ .

ತಾವು ಬರೆಯುವುದಲ್ಲದೆ ಬರೆಯ ಬಯಸುವವರಿಗೆ ಸೂಕ್ತ ಮಾರ್ಗದರ್ಶನವೂ ಇಲ್ಲಿದೆ

ಹತ್ತನೇ ವರ್ಷಕ್ಕೆ ಕಾಲಿಟ್ಟಿರುವ ಇ ಜ್ಞಾನ .com  ಇನ್ನೂ ಹತ್ತು ಹಲವು ದಶಕಗಳ ಕಾಲ ಅವಿರತವಾಗಿ ನಡೆಯಲಿ ಎಂದು ಹಾರೈಸುತ್ತೇನೆ.

No comments

Appreciate your efforts and interests to comment. Comments may be moderated due to increased spam. Will ideally respond to comments within few days.Use Anonymous option if you don't wish to leave your name/ID behind- Shrinidhi

Powered by Blogger.