World travel in low budget-Kannada-ebook now available with mylang - eNidhi India Travel Blog

World travel in low budget-Kannada-ebook now available with mylang

My Kannada book on "World travel in low budget" is now available as an eBook with Mylang Books. Readers can buy the digital version and read on the phone or laptop at their convenience. This post shares additional details and purchase process in Kannada.
ಕನ್ನಡದಲ್ಲಿ ಸುಲಭವಾಗಿ ಈ ಬುಕ್ ಪ್ರಕಟಿಸುವ ವ್ಯವಸ್ಥೆ ಇಲ್ಲಿಯ ತನಕ ಇರಲಿಲ್ಲ.
ಬೆಂಗಳೂರು ಮೂಲದ ಮೈ ಲ್ಯಾಂಗ್ ಬುಕ್ಸ್ ಸಂಸ್ಥೆ ಹಲವಾರು ಕನ್ನಡ ಪುಸ್ತಕಗಳನ್ನು ಈ-ಬುಕ್ ರೂಪದಲ್ಲಿ ಹೊರತಂದಿದ್ದಾರೆ.  ಇವುಗಳಲ್ಲಿ ನನ್ನ "ವಿಶ್ವ ದರ್ಶನ - ಬಜೆಟ್ ನಲ್ಲಿ" ಪುಸ್ತಕವೂ  ಒಂದು.

ಪುಸ್ತಕವನ್ನು ಪಡೆದು ಓದುವ ವಿಧಾನ: (ಡೆಸ್ಕ್ ಟಾಪ್ ಅಥವಾ ಲಾಪ್ ಟಾಪ್ ನಲ್ಲಿ)
ಈ ಕೊಂಡಿಯನ್ನು ಅನುಸರಿಸಿ, ಪರದೆಯ ಮೇಲೆ ನೀಡಿದ ಸೂಚನೆ ಪಾಲಿಸಿ ಖರೀದಿಸಿ.

ಪುಸ್ತಕವನ್ನು ಪಡೆದು ಓದುವ ವಿಧಾನ: (ಮೊಬೈಲ್ ನಲ್ಲಿ)
೧. ಪ್ಲೇ ಸ್ಟೋರ್ ನಿಂದ ಮೈ ಲ್ಯಾಂಗ್ ಬುಕ್ಸ್ ಆಪ್ ಹುಡುಕಿ ಅಳವಡಿಸಿಕೊಳ್ಳಿ . ಮೈ ಲ್ಯಾಂಗ್ ಅಪ್ಲಿಕೇಶನ್ ಸುಮಾರು ೫೦ ಎಂಬಿ ಇದ್ದು ನಿಮ್ಮ ಅಂತರ್ಜಾಲ ಸಂಪರ್ಕದ ವೇಗ ಅವಲಂಬಿಸಿ ಒಂದೆರಡು ನಿಮಿಷದಲ್ಲಿ ಡೌನ್ ಲೋಡ್ ಆಗುತ್ತದೆ.
೨. ನಿಮ್ಮ ಮೊಬೈಲ್ ನಂಬರ್ ನೀಡಿ ನೊಂದಾಯಿಸಿಕೊಳ್ಳಿ , ಮೊಬೈಲಿಗೆ ಬಂದ  OTP ಅಂದರೆ ಗುಪ್ತ ಸಂಕೇತ ಬಳಸಿ ಖಾತೆ ತೆರೆಯಿರಿ.

೩. ಅಪ್ಲಿಕೇಶನ್ ತೆರೆದು ನನ್ನ ಪುಸ್ತಕವನ್ನು ಹುಡುಕಿ. ಸಧ್ಯಕ್ಕೆ ನನ್ನ ಪುಸ್ತಕ ಸ್ವಲ್ಪ ಕೆಳಗೆ ಸ್ಕ್ರೋಲ್ ಮಾಡಿದರೆ ಸಿಗುತ್ತದೆ. ಮುಂದಿನ ದಿನಗಳಲ್ಲಿ ಇನ್ನೂ  ಹಲವು ಪುಸ್ತಕ ಸೇರ್ಪಡೆ ಆದಾಗ ಸ್ವಲ್ಪ ಹುಡುಕಬೇಕಾಗಬಹುದು. ಇಂಗ್ಲಿಷ್ ನಲ್ಲಿ ಹುಡುಕಿದರೆ ಸಿಗುವುದಿಲ್ಲ. ಕನ್ನಡದಲ್ಲಿ ವಿಶ್ವ ಎಂದು ಟೈಪಿಸಿ ಹುಡುಕಿದರೆ ಸಿಗುತ್ತದೆ.

೪. ಈ-ಪುಸ್ತಕಗಳು ಉಚಿತವಲ್ಲ. ಸ್ವಲ್ಪ ಹಣ ತೆರಬೇಕಾಗುತ್ತದೆ. ಮುದ್ರಿತ ಪ್ರತಿಯ ಸುಮಾರು ಅರ್ಧ ಬೆಲೆಗೆ ಈ ಬುಕ್ ಲಭ್ಯವಿದೆ. ಒಮ್ಮೆ ಖರೀದಿಸಿದರೆ ಸದಾ ಕಾಲ ನಿಮ್ಮೊಡನೆ ಇರುತ್ತದೆ. (ಆದರೆ ಈ ಬುಕ್ ಗಳು DRM (Digital Rights Management) ಅಂದರೆ ತಾಂತ್ರಿಕ ಹಕ್ಕು ನಿರ್ವಹಣೆ ತಂತ್ರಜ್ಞಾನ ಹೊಂದಿರುವುದರಿಂದ ಇತರರಿಗೆ ಹಂಚಲಾಗುವುದಿಲ್ಲ. ಅನಧಿಕೃತ ನಕಲು ತಪ್ಪಿಸಲು ಇದು ಅವಶ್ಯಕ. ಪುಸ್ತಕವನ್ನು ಬರೆದ ಲೇಖಕರ ಶ್ರಮ ಹಾಗು ಬೌದ್ಧಿಕ ಅಧಿಕಾರಕ್ಕೆ ನೀಡಬೇಕಾದ ಸಣ್ಣ ಕೊಡುಗೆ.

೫. ಪುಸ್ತಕವನ್ನು ಕೊಳ್ಳುವ ಚೀಲಕ್ಕೆ ಹಾಕಿ ಇನ್ನಷ್ಟು ಖರೀದಿ ಮಾಡಬಹುದು, ಅಥವಾ "BUY IT NOW" ಕ್ಲಿಕ್ಕಿಸಿ ತಕ್ಷಣ ಖರೀದಿಸಬಹುದು. ಕೆಲವು ಕಡ್ಡಾಯ ಮಾಹಿತಿ ನೀಡಿ (ಒಮ್ಮೆ ನೀಡಿದರೆ ಸಾಕು, ಮುಂದಿನ ಖರೀದಿಗೆ ತಾನಾಗೇ ಈ ಮಾಹಿತಿ ತುಂಬಿಕೊಳ್ಳುವ ಸೌಲಭ್ಯವಿದೆ) ಹಣ ಪಾವತಿಸಬೇಕು.  ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, ಯುಪಿಐ, ಪೇ  ಲೇಟರ್ (ಲೇಜಿ ಪೇ  ಇತ್ಯಾದಿ) ಆಯ್ಕೆ ಇವೆ.

೬. ಹಣ ಪಾವತಿಸಿದ ನಂತರ ಪುಸ್ತಕ ಓದಲು ಸಾಧ್ಯ.

ಮೈ ಲಾಂಗ್ ತಾಣದಲ್ಲಿ ಹೆಚ್ಚಿನ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ಕಿಸಿ

ಮುದ್ರಿತ ಪುಸ್ತಕ ಖರೀದಿಸಲು ಆಸಕ್ತಿ ಇಲ್ಲದವರಿಗೆ, ಅಥವಾ ಕಾರಣಾಂತರಗಳಿಂದ ಮುದ್ರಿತ ಪುಸ್ತಕ ಪಡೆಯುವ ಸೌಲಭ್ಯ ಇಲ್ಲದವರಿಗೆ (ಉದಾ ವಿದೇಶದಲ್ಲಿರುವವರು) ,ಸದಾ ಕಾಲ ಮೊಬೈಲಿನಲ್ಲೇ ಮುಳುಗಿ ಎಲ್ಲವನ್ನೂ  ಅಲ್ಲೇ ಮಾಡುವ ಹುಮ್ಮಸ್ಸಿರುವವರಿಗೆ ಮತ್ತು ಈ ಬುಕ್ ಮೂಲಕ ಸ್ವಲ್ಪ ಹಣ ಉಳಿಸುವ ಬಯಕೆ ಉಳ್ಳವರಿಗೆ ಮೈ ಲ್ಯಾಂಗ್ ಈ ಬುಕ್ ಗಳು ಉತ್ತಮ ಆಯ್ಕೆ. ಖರೀದಿಸಿ, ನಿಮ್ಮ ಅಭಿಪ್ರಾಯ ತಿಳಿಸಿ. ನಿಮ್ಮ ಪ್ರೋತ್ಸಾಹಕ್ಕೆ ನಾನು ಚಿರಋಣಿ .

ಪುಸ್ತಕದ ಕುರಿತಂತೆ ಇನ್ನಿತರ ಮಾಹಿತಿ ಇಲ್ಲಿದೆ.

No comments

Appreciate your efforts and interests to comment. Comments may be moderated due to increased spam. Will ideally respond to comments within few days.Use Anonymous option if you don't wish to leave your name/ID behind- Shrinidhi

Powered by Blogger.