Jatta Kannada movie review - eNidhi India Travel Blog

Jatta Kannada movie review

For the benefit of Non-kannada readers, this post is about a kannada movie called Jatta. If this doesn't interest you, click here to read other posts.


ನಾನು ೪೦ ರುಪಾಯಿ  ಕೊಟ್ಟು ಸಿನೆಮಾ ನೋಡಿ ಎಷ್ಟೋ ಕಾಲ ಆಗಿತ್ತು . ಗೆಳೆಯ ಗಿರಿರಾಜ ನ ನಿರ್ದೇಶನದಲ್ಲಿ ಮೂಡಿ ಬಂದ ಜಟ್ಟ ಸಿನೆಮ ನೋಡಬೇಕು ಎನಿಸಿದರು ಸೋಮಾರಿತನದಿಂದ ಇಂದು ನಾಳೆ ಎಂದು ತಡವಾಗುತ್ತ ಹೋಯಿತು . ಜಟ್ಟ ನೊಡಲು ಮಂಗಳೂರಿಗೆ ಹೋಗಬೇಕೆನೋ ಅಂದುಕೊಂಡಿದ್ದೆ, ಕುಂದಾಪುರದ ವಿನಾಯಕ ಚಿತ್ರ ಮಂದಿರ ದಲ್ಲಿ ಜಟ್ಟ ನಡೆಯುತ್ತಿರುವುದು ಪೋಸ್ಟರ್ ಗಳಿಂದ ತಿಳಿಯಿತು. ಮೊನ್ನೆ ಸೋಮವಾರ ಸಂಜೆ ಪುರುಸೊತ್ತು ಮಾಡಿಕೊಂಡು ಕುಂದಾಪುರ ಕ್ಕೆ ಹೋದೆವು. ನಾವು ಹೋದಾಗ ೬ ಗಂಟೆ ಆಗಿತ್ತು. ಚಿತ್ರ ಮಂದಿರದ ಸಿಬ್ಬಂದಿಯವರೊಂದಿಗೆ ವಿಚಾರಿಸಿದಾಗ ಇಂದೇ ಕೊನೆಯ ದಿನವೆಂದೂ, ೭. ೩೦ ಕ್ಕೆ ಕೊನೆಯ ಷೋ ಇರುವುದೆಂದೂ ತಿಳಿಸಿದರು .

ನಾವು ಅಲ್ಲಿಲ್ಲಿ ಸುತ್ತಾಡಿ ೭ ಗಂಟೆಗೆ ಚಿತ್ರಮಂದಿರಕ್ಕೆ ವಾಪಾಸು ಹೋದೆವು. ೪೦ ರೂ ಬಾಲ್ಕನಿ ಟಿಕೇಟು. ಕೊಂಡು ಒಳಗೆ ಹೋದಾಗ ಯಾರೂ ಇರಲಿಲ್ಲ. ಸಿನೆಮ ಪ್ರಾರಂಭ ವಾಗುವ ಹೊತ್ತಿಗೆ ಇನ್ನು ಕೆಲವರು ಬಂದರು. ಒಟ್ಟು ೧೦-೧೫ ಜನರಿದ್ದರು.


ಜಟ್ಟ ಚಿತ್ರದಿಂದ ಏನನ್ನು expect ಮಾಡಬೇಕು ಅನ್ನುವ ಖಚಿತತೆ ನಮಗೆ ಇರಲಿಲ್ಲ . ನಿರ್ದೇಶಕರ ಮುಖಪುಸ್ತಕ ಗೋಡೆ ಮೇಲಿನ ಬರಹದ ಪ್ರಕಾರ ಇದು ಎಂಟರ್ಟೈನ್ಮೆಂಟ್ /ಆಕ್ಷನ್ /ರೋಮ್ಯಾನ್ಸ್ ಆಧಾರಿತ ಸಿನೆಮಾ ಅಲ್ಲ . ಇನ್ನೇನಿರಬಹುದು ಎಂಬ ಕುತೂಹಲದೊಂದಿಗೆ ಸಿನೆಮ ನೋಡಲು ಕುಳಿತೆವು .

ಜಟ್ಟ ಎಂದರೆ ಏನು? ಎಂದು ನೀವು ಮಂಡೆ ಬಿಸಿ ಮಾಡಿಕೊಳ್ಳುತ್ತಿದ್ದರೆ ಹೇಳಿಬಿಡುತ್ತೇನೆ - ಅದು ಸಿನೆಮಾ ನಾಯಕನ ಹೆಸರು. ಕಿಶೋರೆ ಕುಮಾರ್ in  ಅಂಡ್ as ಜಟ್ಟ - ಕಾಡಿನಲ್ಲಿ ಫಾರೆಸ್ಟ್ ಗಾರ್ಡ್. ಆತನ ಜೀವನದ ಕಥೆ- ಕಾಡಿನ ಮೇಲೆ ಆತನಿಗಿರುವ ಪ್ರೀತಿ, ಬದುಕಿನೆಡೆಗಿನ ದ್ವಂದ್ವ , ಆತನ ಆಲೋಚನೆಗಳ ಮೇಲೆ ಸಂಸ್ಕೃತಿಯ ರಕ್ಷಕರಂತೆ ಪೋಸ್ ಕೊಡುವವರ ಪ್ರಭಾವ, ಸಮಾಜವನ್ನು ಸುಧಾರಿಸಲು ಹೊರಟ ಉಮೇದಿನಲ್ಲಿ ಆತ ಮಾಡಿಕೊಳ್ಳುವ ಎಡವಟ್ಟುಗಳು ಕಥೆಯ ಜೀವಾಳ .
ಸಂಸ್ಕೃತಿ, ಅದರ ರಕ್ಷಣೆ ಎಂದರೆ ಏನು? ಅದರ ಜವಾಬ್ದಾರಿ ಯಾರದ್ದು? ಮಾನವ ಸಂಬಂಧಗಳ ನಡುವೆ ಸರಿ ತಪ್ಪಿನ ವ್ಯಾಖ್ಯಾನವೇನು? ಬದಲಾವಣೆ ತರುವುದು ಎಂದರೆ ಏನು ಮತ್ತು ಹೇಗೆ? ಸ್ವ ಘೋಷಿತ ಸಂಸ್ಕೃತಿ ರಕ್ಷಕರ ಬಂಡವಾಳವೇನು? ಕಾಡಿನ ಹಿನ್ನೆಲೆ/ಕಾನ್ಸೆಪ್ಟ್ ಇಟ್ಟುಕೊಂಡು ಈ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಸಿನೆಮಾದಲ್ಲಿ ಮಾಡಲಾಗಿದೆ.  ಅಲ್ಲೊಂದು ಇಲ್ಲೊಂದು ದೃಶ್ಯಗಳು ವಿಕೃತಿ ಎನಿಸಿದರು, ಅವನ್ನು ನಿರ್ದೇಶಕರ ಕಲಾ ಸ್ವಾತಂತ್ರ್ಯ ಎಂದುಕೊಂಡು ಸುಮ್ಮನಾಗುವುದು ಒಳಿತು . ನಾಯಕಿಯೊಬ್ಬಳು ಸಿನೆಮಾದುದ್ದಕ್ಕೂ ಒಂದೇ ಕೊಣೆಯಲ್ಲಿ (ok  ಕೋಣೆ ಮತ್ತದರ ಸುತ್ತ ಮುತ್ತ) ಉಳಿದು ಕಂಬಳಿ ಹೊದ್ದು ನಟಿಸಿರುವುದು ಬಹುಶಃ ಬೇರೆ ಯಾವ ಸಿನೆಮಾದಲ್ಲೂ ಇದ್ದಿರಲಾರದು. ನಾಯಕಿಯಾದವಳು ಆಗಾಗ ಕುಣಿಯಬೇಕು, ಇನ್ನೇನೋ ಮಾಡಬೇಕು ಎಂದೆಲ್ಲ ನಿರೀಕ್ಷಿಸುವ ಪ್ರೇಕ್ಷಕ ವರ್ಗಕ್ಕೆ ಜಟ್ಟ ಇಷ್ಟವಾಗಲಾರದು.  ಕಥೆಯಲ್ಲಿ ಅಡಗಿರುವ ಸೂಕ್ಷ್ಮ ಸಂದೇಶವನ್ನು, ಕಹಿ ಸತ್ಯವನ್ನು ಗ್ರಹಿಸುವ ಮನಸ್ಸು/ಆಸಕ್ತಿ ಇರುವವರಿಗೆ ಜಟ್ಟ ಖಂಡಿತ ಇಷ್ಟವಾಗುತ್ತದೆ.

ಉತ್ತರ ಕನ್ನಡದ ಕಾಡುಗಲ್ಲಿ ಸಂಪೂರ್ಣ ಚಿತ್ರ ಮೂಡಿಬಂದಿದೆ. ಅನಗತ್ಯ ಹಾಡು, ಕುಣಿತ, ಹೊಡೆತ ಯಾವುದು ಜಟ್ಟ ದಲ್ಲಿಲ್ಲ. ಸೂಕ್ಷ್ಮ ಸಂದೇಶವೊಂದನ್ನು ನೋಡುಗರ ಮನಸ್ಸಿಗೆ ನಾಟುವಂತೆ ತಿಳಿಸಿಕೊಡುವ ಪ್ರಯತ್ನವೊಂದನ್ನು ಮಾತ್ರ ಪ್ರಾಮಾಣಿಕವಾಗಿ ಮಾಡಲಾಗಿದೆ . ಇದೇ ಕತೆಯನ್ನು ಇತರ ನಿರ್ದೇಶಕರು ವಹಿಸಿಕೊಂಡಿದ್ದರೆ ಇನ್ನಷ್ಟು ಮೋಜು ಮಸ್ತಿ ಸೇರಿಸಿ ಕಮರ್ಷಿಯಲ್ ಚಿತ್ರ ಮಾಡುತಿದ್ದರೊ ಏನೋ - ಹಾಗೆ ಮಾಡಿದ್ದಲ್ಲಿ ಪ್ರೇಕ್ಷಕರು ನೃತ್ಯ, ಫೈಟ್ ನೋಡಿಕೊಂಡು ಖುಶಿಪಟ್ಟುಕೊಂಡು ಹೋಗುತ್ತಿದ್ದರೆ ವಿನಾ ಸಿನೆಮಾದ ಸಂದೇಶದ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಹಾಗಾಗ ಬಾರದು ಎಂಬ ನಿರ್ದೇಶಕರ ಕಾಳಜಿಯೇ ಸಿನೆಮಾ ಒಂದು ವಾರವೂ ಸರಿಯಾಗಿ ನಡೆಯದಂತೆ ಮಾಡಿದರೆ ಅದನ್ನು ಸಿನೆಮಾ ಮಾಡಿದವರ ತಪ್ಪು ಎನ್ನುವುದಕ್ಕಿಂತ ಪ್ರೇಕ್ಷಕರ ಬದಲಾದ priority ಗೆ ಹಿಡಿದ ಕೈಗನ್ನಡಿ ಎನ್ನಬೇಕಾಗುತ್ತದೆ.

ಚಿತ್ರದಲ್ಲಿ ಕುಂದಾಪುರ ಕನ್ನಡವನ್ನು ಸಾಕಷ್ಟು ಬಳಸಿರುವುದು, ಉತ್ತಮ locations & ಛಾಯಾಗ್ರಹಣ ಇವು ಚಿತ್ರದ ಕೆಲವು ಪ್ಲಸ್ ಪಾಯಿಂಟ್ಸ್

ದುರದೃಷ್ಟ ವಶಾತ್ ರಾಜ್ಯದ ಹಲವು ಸಿನೆಮಾ ಮಂದಿರಗಳು ಜಟ್ಟ ಚಿತ್ರವನ್ನು ಈಗಾಗಲೆ ಎತ್ತಂಗಡಿ ಮಾಡಿವೆ (ಪ್ರೇಕ್ಷಕರು ಬಾರದ ಕಾರಣ ಕೊಟ್ಟು). ಪುರುಸೊತ್ತು ಇದ್ದರೆ ಇನ್ನುಳಿದ ಚಿತ್ರಮಂದಿರಗಳಲ್ಲಿ ಒಮ್ಮೆ ನೋಡಿ ಬನ್ನಿ. ಹಾಗೇ ನಿರ್ದೇಶಕ ಗಿರಿರಾಜ್ ರ  facebook ಬರಹಗಳ ಮೇಲೊಮ್ಮೆ ಕಣ್ಣಾಡಿಸಿ- ಚಿತ್ರ ನಿರ್ಮಾಣ ಮತ್ತು ಪ್ರದರ್ಶನದ ಬಗ್ಗೆ ಅವರು ಪಟ್ಟಿರುವ ಕಷ್ಟದ ಅರಿವು ನಿಮಗಾಗುತ್ತದೆ

Also see: Navilaadavaru Kannada movie * 10 in 1 movie review *

3 comments:

  1. ನಮ್ಮೂರುಗಳಲ್ಲೂ ಮೊದಲದಿನ ಮಾತ್ರ ಒಂದಿಶ್ಟು ಜನ ಇರ್ತಾರೆ. ಉಳಿದ ದಿನ ಖಾಲಿ.

    ReplyDelete
  2. ಥ್ಯಾಂಕ್ಸ್ ಗೆಳೆಯ

    ReplyDelete

Appreciate your efforts and interests to comment. Comments may be moderated due to increased spam. Will ideally respond to comments within few days.Use Anonymous option if you don't wish to leave your name/ID behind- Shrinidhi

Powered by Blogger.